ARAVINDA VISHWANATHAPURA

ಬೆಂಗಳೂರಲ್ಲಿ ಟ್ರಾಫಿಕ್ ಪೋಲೀಸ್ ರ ದರ್ಪ

Jun 23, 2013
1 minute read.
ಕನ್ನಡ ಟ್ರಾಫಿಕ್ ಪೋಲೀಸ್ kannadablog
UPDATE:
ಬೆಂಗಳೂರು ಟ್ರಾಫಿಕ್ ನ ಫೇಸ್ ಬುಕ್ ಪುಟದಲ್ಲಿ ಬರೆದಿದ್ದೇನೆ. ಇನ್ನೂ ಉತ್ತರವಿಲ್ಲ. https://www.facebook.com/BangaloreTrafficPolice/posts/515665408499171

ಮಲ್ಲೇಶ್ವರ 10th ಕ್ರಾಸ್, 2nd ಮೈನ್ ರೋಡ್ ಹತ್ರ ಇರೋ ಗಣೇಶನ ದೇವಸ್ತಾನದ ಹತ್ತಿರ ಒಳಗಿನ ರೋಡ್ ನಲ್ಲಿ ಬೈಕ್ ನಿಲ್ಲಿಸಿಕೊಂಡು ಫ್ರೆಂಡ್ ಗೋಸ್ಕರ ಕಾಯ್ತಾ ಇದ್ದೆ.

ಅಲ್ಲಿಗೆ ಇಬ್ಬರು ಟ್ರಾಫಿಕ್ ಪೋಲೀಸ್ ಬಂದರು, ಅಲ್ಲೇ ಸೈಡ್ ಗೆ ನಿಲ್ಲಿಸಿಕೊಂಡ್ರು. "ಇವತ್ತು ಬಲಗಡೆ ಪಾರ್ಕಿಂಗ್ ಅಲ್ವಾ? ಇವರಾದ್ರೆ ಎಲ್ಲಿ ಬೇಕಾದ್ರೂ ಗಾಡಿ ನಿಲ್ಲಿಸ್ಕೋಬೋದು" ಅಂತ ಮನಸಲ್ಲೇ ಅಂದುಕೊಂಡೆ.

ನನ್ನ ಫ್ರೆಂಡ್ ಬಂದ, ಅವನನ್ನು ಕೂರಿಸಿಕೊಂಡು ಹೊರಟೆ, ಹೊರಡುವಾಗ ಸೈಡ್ ನಲ್ಲಿದ್ದ ಹೊಂಡದೊಳಕ್ಕೆ ಬೈಕ್ ಇಳೀತು, ಮೇಲೆ ಹತ್ತಲಿಲ್ಲ ಒಂದೇ ಸಲ, ಸಲ್ಪ accelerator ಕೊಟ್ಟೆ, ಬರೀ ಚಕ್ರ ತಿರುಗಿತು, ಅಮೇಲೆ ಫ್ರೆಂಡ್ ನ ಇಳಿಯಕ್ಕೆ ಹೇಳಿ, ಮೇಲೆ ಹತ್ತಿಸಿದೆ. ಅಲ್ಲಿದ್ದ ಟ್ರಾಫಿಕ್ ಪೋಲೀಸ್ ಒಂದೇ ಸಮ ಬೈತಿದ್ದ ನನಗೆ, ಅಮೇಲೆ ನೋಡುವಾಗ ಈ ಚಕ್ರದ ಸರ್ಕಸ್ ಅಲ್ಲಿ ಹೊಂಡದಲ್ಲಿದ್ದ ನೀರು ಅವರ ಪ್ಯಾಂಟ್ ಗೆ ಒಂದೆರಡು ಹನಿ ಹಾರಿತ್ತು. ಹೊಂಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ತಲೆಬಿಸಿಯಲ್ಲಿದ್ದ ನನಗೆ ಅಯ್ಯೋ ಥೋ ಇವರಿಗೆ ಹಾರಿತಾ ಅಂತ sorry ಅಂದೆ. ಆದರೆ ಅಷ್ಟರಲ್ಲಾಗಲೇ ಆ ವ್ಯಕ್ತಿ ಗರಮ್ ಆಗಿದ್ರು, ಹಾಕ್ರೀ ಗಾಡಿನ ಸೈಡ್ ಗೆ 400 ರುಪಾಯಿ ಫೈನ್ ಕಟ್ಟಿ ಅಂದ್ರು.

ನಾನು ಬೈಕ್ ನ ಸೈಡ್ ಗೆ ನಿಲ್ಲಿಸಿದೆ, ಸಲ್ಪ ಹೊತ್ತು ಸುಮ್ಮನಿದ್ದೆ, ಬೈಕ್ ತೆಗೆಯುವಾಗ ಹೊಂಡಕ್ಕೆ ಇಳಿದಿದ್ದರಿಂದ ನೋಡ್ಲಿಲ್ಲ, ಇಂಬ್ಯಾಲೆನ್ಸ್ ಆಯ್ತು ಅಂದೆ. ಅವರು ಯಾವುದನ್ನೂ ಕೇಳೋದಕ್ಕೆ ತಯಾರಿರಲಿಲ್ಲ. ಸಲ್ಪ ಹೊತ್ತು ಸುಮ್ಮನೆ ನಿಂತೆ.

ಆಗ ಅಲ್ಲೇ ಹೋಗುತ್ತಿದ್ದವರು ಒಬ್ಬರು, "ಏನ್ ಸಾರ್ ಕೆಸರು ಹಾರಿದ್ದಕ್ಕೆಲ್ಲ ಫೈನ್ ಕಟ್ಟಿಸಿಕೊಳ್ಳುತ್ತಿದ್ದೀರಾ? ಅವ್ರು ಬೇರೆ ನಿಲ್ಲಿಸಿಕೊಂಡು sorry ಕೇಳಿದಾರೆ. ರೋಡ್ ಗಳು ನೋಡಿದ್ರೆ ಹಿಂಗಿದಾವೆ ಹೊಂಡಗಳಲ್ಲಿ ಬಿದ್ರೂ ಯಾರೂ ಕೇಳೋರಿಲ್ಲ" ಅಂತ.

ಅದಕ್ಕೆ ಈ ಟ್ರಾಫಿಕ್ ಪೋಲೀಸ್.. "ನೀವ್ಯಾರು ಇದನ್ನೆಲ್ಲಾ ಕೇಳೋಕೆ, ಅವ್ರೇ ಅಲ್ಲಿ ಸುಮ್ನೆ ನಿಂತಿದಾರೆ. ಹೋಗ್ರೀ ನಿಮ್ಮ ಕೆಲ್ಸ ನೋಡ್ರೀ.. ರೋಡ್ ವಿಷ್ಯ ಕಾರ್ಪೋರೇಷನ್ ಅವ್ರಿಗೆ ಹೋಗಿ ಹೇಳಿ, ನಮ್ಗೇನ್ ಅದ್ರ ಬಗ್ಗೆ ಹೇಳ್ತೀರಾ.. ಅಲ್ಲಿ ಹೋಗಿ ಮಾತಡಕ್ಕೆ ಧೈರ್ಯ ಇಲ್ಲ ಇಲ್ಲಿ ಬಂದ್ಬಿಟ್ರು ಹೇಳಕ್ಕೆ" ಅಂತ ಜಗಳಕ್ಕೇ ಶುರು ಮಾಡಿದ್ರು.

ಪಾಪ ಅವರೂ ಇನ್ನೊಂದು ಸಲ ಹೇಳೋಕೆ ಹೋದ್ರು, ಆದರೆ ಈ ಅಧಿಕಾರದ ದರ್ಪದ ಮುಂದೆ ಏನೂ ಮಾತನಾಡಲಾಗದೆ ಹೊರಟರು. ಹಾಗೇ ಜನನೂ ಸೇರುತ್ತಾ ಇದ್ದರು, ಅವರಲ್ಲಿ ಕೂಡ ತುಂಬಾ ಜನ ಹೇಳಿ ನೋಡಿದ್ರು. ಗೊತ್ತಿಲ್ಲದೇ ಆಗಿರೋದು ಇದಕ್ಕೆ ಫೈನ್ ಹಾಕಿಸ್ಕೊಳ್ಳೋದು ಏನು ಸರಿಯಿರುತ್ತೆ ಅಂತ. ಅವರೆಲ್ಲರಿಗೂ ಜೋರು ಮಾಡಿ ಕಳಿಸಿದ್ರು.

Lane indiscipline ಮತ್ತೆ reckless/dangerous driving in two wheeler ಅಂತ ಬರೆದ್ರು. ನಾನು ಹೇಳಿದೆ, "ನನ್ನ ತಪ್ಪು ಒಪ್ಕೋಳ್ತೀನಿ, ತಿಳೀದೇ ಆದ ತಪ್ಪಿಗೆ ಕ್ಷಮೆನೂ ಕೇಳಿದ್ದೀನಿ ಆದರೆ ಅದನ್ನ reckless/dangerous ಡ್ರೈವಿಂಗ್ ಅಂತ ಕೇಸ್ ಹಾಕುದ್ರೆ ಹೇಗಾಗುತ್ತೆ ಸಾರ್" (ಅದು ಸಣ್ಣ ರೋಡ್ ಆಗಿದ್ರಿಂದ ಲೇನ್ discipline ಹೇಗೆ ಅಂತ ಅವರಿಗೇ ಗೊತ್ತು)

"Lane indiscipline ಹೇಗಾಗುತ್ತೆ, ಬರೋ ದಾರಿಯಲ್ಲಿ ಹೊಂಡ ಇದ್ರೆ" ಅಂತ ಕೇಳಿದೆ. ಅದಕ್ಕೆ ಅವ್ರು ಹೊಂಡ ಇದ್ರೆ ಆ ಕಡೆಯಿಂದ ಬರ್ಬೇಕಿತ್ತು ಅಂತ ಉಡಾಫೆ ಉತ್ತರ ಕೊಟ್ರು.

ಜನರೆಲ್ಲ ಒಬ್ಬೊಬ್ಬರಾಗೇ ಹೋಗ್ತಾ ಇದ್ರು.

ನಾನು "ಇದು ಜನಸಾಮಾನ್ಯರ ಸುಲಗೆ" ಅಂದೆ.

ಜಾಸ್ತಿ ಮಾತಾಡಿದ್ರೆ ನಿನ್ನ ಮೇಲೂ ಕೇಸ್ ಹಾಕ್ತೀನಿ ಅಂದ್ರು.

"ಹಾಕ್ತೀರಾ ಸಾರ್..ಹಾಕ್ತೀರಾ.. ನಿಮ್ಗೆ ಪವರ್ ಇದೆ ನೀವು ಮಾಡ್ತೀರ" ಅಂದೆ.

ಜಗಳವಾಗಿ ಪರಿವರ್ತನೆಯಾದರೆ ಕಷ್ಟ ಎಂದು ಅಲ್ಲೇ ಇದ್ದವರು ಒಬ್ಬರು ಬಂದು. ಆಯ್ತಲ್ಲ ಬಿಡಿ ಏನ್ ಮಾಡೊಕಾಗುತ್ತೆ ಅಂತ ನನಗೆ ಹೇಳಿದರು. ನನಗೂ ಅನ್ನಿಸಿತು ಇಲ್ಲಿ ಇದನ್ನು ಮುಂದುವರೆಸಿದರೆ ಯಾರಿಗೂ ಉಪಯೋಗವಿಲ್ಲ ಅಂತ.

ಕೊನೆಗೂ ಅವರು ಫೈನ್ ಕಟ್ಟಿಸಿಕೊಳ್ಳದೆ ಬಿಡಲಿಲ್ಲ.

ನನ್ನಿಂದ ಅವರ ಪ್ಯಾಂಟ್ ಗೆ ನೀರ ಹನಿಗಳು ಹಾರಿದ್ದು ನಿಜ. ಆದರೆ ಅದು ಬೇಕಂತಲೇ ಮಾಡಿದ್ದಲ್ಲ. ಅದಕ್ಕೆ ಬೇರೆ ಏನಾದರೂ ವ್ಯವಸ್ತೆ ಮಾಡಬಹುದಿತ್ತು. sorry ಕೇಳಿದ ನಂತರ ಅದನ್ನು ಡ್ರೈ ಕ್ಲೀನಿಂಗ್ ಮಾಡಿಸಿ ಕೊಡಲು ಕೇಳಬಹುದಿತ್ತು. Personal issue ನ ಈತರ ಸುಳ್ಳು ಸುಳ್ಳು ಕೇಸ್ ಹಾಕೋದು ಎಷ್ಟು ಸರಿ? (ಅವರ ಪ್ಯಾಂಟ್ ಗೆ ಹಾರಿದ ಹನಿಗಳು ಮಾತನಾಡುವಾಗಲೇ ಒಣಗಿ ಹೋಗಿತ್ತು ಅಂತ ಅಲ್ಲೇ ನಿಂತಿದ್ದ ನನ್ನ ಗೆಳೆಯ ಆಮೇಲೆ ಹೇಳಿದ.)

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in