ಅವನು-ಇವನು - ಸೂರ್ಯಂಗೇ ಟಾರ್ಚ್

ಅವನು ಸಾಮಾನ್ಯವಾಗಿ ಇವನಿಗಿಂತ ಬೇಗ ಏಳ್ತಾನೆ, ಬೇಗ ಅಂದ್ರೆ ತುಂಬಾ ಬೇಗ ಅಂತ ಅಂದ್ಕೋಬೇಡಿ... ಇವನು ಏಳೋದು ಬೆಳಗ್ಗೆ 8:45-8:50 ಆಗಿದ್ರೆ ಅವನು 8:15-8:30 ಗೆಲ್ಲಾ ಎದ್ದಿರ್ತಾನೆ.

ಹಾಗೇ ಕೆಲವು ದಿನ ಅವನು ಬೇಗನೇ ಆಫೀಸ್ಗೆ ಹೋಗ್ತಿರ್ತಾನೆ.

ಒಂದಿನ ಅವನು ಬೇಗನೇ ಎದ್ದಿದ್ರೂ ಹೊರಡೋದು ಲೇಟ್ ಆಗಿತ್ತು .. ಅಷ್ಟರಲ್ಲಿ ಇವನು ಅಪರೂಪಕ್ಕೆ ಬೇಗ ಹೊರಟಾಗಿತ್ತು.

ಹಾಗೇ ಇಬ್ಬರೂ ತಿಂಡಿಗೆ ಒಟ್ಟಿಗೇ ಹೋಗ್ತಿದ್ರಿಂದ ಇವನು ಹೊರಟಾಗಿದ್ರೂ ಅವನು ರೆಡಿಯಾಗುವವರೆಗೆ ಏನು ಮಾಡೋದು ಅಂತ ಕೊಳಲು ಎತ್ತಿಕೊಂಡು ಮೊನ್ನೆ ಕಲಿತಿದ್ದ "ಸ" ನುಡಿಸೋಕೆ ಶುರು ಮಾಡಿದ.

ಆಗ ಅವನು ಕೇಳಿದ, ಏನೋ ಕೊಳಲು ಬಾರಿಸೋಕೆ ಶುರು ಮಾಡಿದೀ...

ಅದಕ್ಕೆ ಇವನು ದಿನಾ ಬೇಗೆದ್ರೆ ಇದನ್ನೆಲ್ಲಾ ಮಾಡಕ್ಕೆ ಟೈಮ್ ಸಿಗುತ್ತೆ ಕಣೋ ಅಂದ...

Comments !