ಅವನು-ಇವನು - ಸೋಮಾರಿಯಲ್ಲ

ಮತ್ತೊಂದು ಕತೆ :)

ಇವನು ಇನ್ನೇನು ಮಲಗುವಾ ಎಂದು ಹಾಸಿಗೆ ಜೋಡಿಸಿಕೊಳ್ಳುತ್ತಿದ್ದ... ಆಗ

ಅವನು: ಏನು ಸೋಮಾರಿನಪ್ಪಾ ನೀನು?

ಇವನು: ಯಾಕೋ ಹಂಗೇಳ್ತೀಯಾ? ಏನ್ active ಗೊತ್ತಾ ನಾನು!!

ಅವನು: ಹೌದಾ ಹಂಗಾರೆ ಈಗ ಎದ್ದು ಹೋಗಿ ನೀರು ಕುಡಿದು ಬಾ ನೋಡೋಣ.

ಇವನು: ಹೇ ಅದೆಂತಾ ಚಾಲೆಂಜೋ ಯಾರು ಬೇಕಿದ್ರೂ ಮಾಡ್ತಾರೆ

ಅವನು: ನೀ ಮಾಡು ನೋಡಣ!

ಇವನು: ಹಂಗಾರೆ ಈಗ ನೀರು ಕುಡಿದುಕೊಂಡು ಬಂದ್ಬಿಟ್ರೆ active ಅಂತ ಪ್ರೂವ್ ಮಾಡಿದಂಗಾ?

ಅವನು: ನೀ ನೀರು ಕುಡಿದು ಬಾ ನೋಡಣ!

ಇವನು: ಸೋಮಾರಿಗಳು ನೀರು ಕುಡ್ಯಲ್ಲಾ ಅಂತನಾ?

ಅವನು: ಹಂಗಲ್ಲಾ... ನೀ ಹೋಗಿ ಬಾ ನೋಡಣ!

ಇವನು: ಅದೇನು ದೊಡ್ಡ ಕೆಲ್ಸನಾ ಈಗ್ಲೇ ಹೋಗಿ ಕುಡಿತೀನಿ ನೋಡು.

ಅವನು: ನೋಡೋಣ

* ಸಲ್ಪ ಹೊತ್ತಿನ ನಂತರ *

ಅವನು: ಗೊತ್ತಾಯ್ತು ಬಿಡೋ ನೀನು ಎಷ್ಟು active ಅಂತ

ಇವನು: Zzzz.....

(ಸಂಭಾಷಣೆ ಕಾಲ್ಪನಿಕ! ಕತೆಯ ಪಾತ್ರದಲ್ಲಿ ಒಂದು ನಾನೆ ಇರಬಹುದೆಂದು ಅನ್ನಿಸಿದಲ್ಲಿ ಅದು ಕೇವಲ ಆಕಸ್ಮಿಕ :) )

Comments !