ಅವನು-ಇವನು - ಸೋಮಾರಿಯಲ್ಲ
Oct 6, 2010
1 minute read.
ಅವನು-ಇವನು
ಹಾಸ್ಯ
kannadablog
ಮತ್ತೊಂದು ಕತೆ :)
ಇವನು ಇನ್ನೇನು ಮಲಗುವಾ ಎಂದು ಹಾಸಿಗೆ ಜೋಡಿಸಿಕೊಳ್ಳುತ್ತಿದ್ದ… ಆಗ
ಅವನು: ಏನು ಸೋಮಾರಿನಪ್ಪಾ ನೀನು?
ಇವನು: ಯಾಕೋ ಹಂಗೇಳ್ತೀಯಾ? ಏನ್ active ಗೊತ್ತಾ ನಾನು!!
ಅವನು: ಹೌದಾ ಹಂಗಾರೆ ಈಗ ಎದ್ದು ಹೋಗಿ ನೀರು ಕುಡಿದು ಬಾ ನೋಡೋಣ.
ಇವನು: ಹೇ ಅದೆಂತಾ ಚಾಲೆಂಜೋ ಯಾರು ಬೇಕಿದ್ರೂ ಮಾಡ್ತಾರೆ
ಅವನು: ನೀ ಮಾಡು ನೋಡಣ!
ಇವನು: ಹಂಗಾರೆ ಈಗ ನೀರು ಕುಡಿದುಕೊಂಡು ಬಂದ್ಬಿಟ್ರೆ active ಅಂತ ಪ್ರೂವ್ ಮಾಡಿದಂಗಾ?
ಅವನು: ನೀ ನೀರು ಕುಡಿದು ಬಾ ನೋಡಣ!
ಇವನು: ಸೋಮಾರಿಗಳು ನೀರು ಕುಡ್ಯಲ್ಲಾ ಅಂತನಾ?
ಅವನು: ಹಂಗಲ್ಲಾ… ನೀ ಹೋಗಿ ಬಾ ನೋಡಣ!
ಇವನು: ಅದೇನು ದೊಡ್ಡ ಕೆಲ್ಸನಾ ಈಗ್ಲೇ ಹೋಗಿ ಕುಡಿತೀನಿ ನೋಡು.
ಅವನು: ನೋಡೋಣ
\* ಸಲ್ಪ ಹೊತ್ತಿನ ನಂತರ *
ಅವನು: ಗೊತ್ತಾಯ್ತು ಬಿಡೋ ನೀನು ಎಷ್ಟು active ಅಂತ
ಇವನು: Zzzz…..
(ಸಂಭಾಷಣೆ ಕಾಲ್ಪನಿಕ! ಕತೆಯ ಪಾತ್ರದಲ್ಲಿ ಒಂದು ನಾನೆ ಇರಬಹುದೆಂದು ಅನ್ನಿಸಿದಲ್ಲಿ ಅದು ಕೇವಲ ಆಕಸ್ಮಿಕ :) )
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage