ಅನಿರೀಕ್ಷಿತ

"ಯಾವ ಕಡೆ ಹೊರಟಿದೀರಾ?"

ಅವಳೊನ್ನಮ್ಮೆ ಹಾಗೇ ನೋಡಿ, "ಗೊತ್ತಿಲ್ಲ"

"ಈ ಬಸ್ ಮಂಗಳೂರಿಗೆ ಹೋಗ್ತಿದೆ"

"ಗೊತ್ತು"

"ನೀವು ಟಿಕೆಟ್ ಎಲ್ಲಿಗೆ ಮಾಡಿಸಿದ್ರಿ?"

"ಮಂಗಳೂರಿಗೆ"

"ಹಾಗಿದ್ರೆ ನೀವು ಮಂಗಳೂರಿಗೆ ಹೊಗ್ತ್ತೀರಲ್ವ?"

"ಗೊತ್ತಿಲ್ಲ"

"ಹಾಗಂದ್ರೆ?"

"ಇವತ್ತು ನಂಗೆ ಬಹಳಷ್ಟು ಸಮಯ ಇದೆ ಅದಕ್ಕೆ, ಇನ್ನೂ ಯೋಚಿಸ್ತಿದೀನಿ"

"ಸರಿ"

"ನೀವು ಯಾವ ಕಡೆ ಹೊರಟಿದೀರ?"

"ಸೂರತ್ಕಲ್"

"ಬೀಚ್ ಗಾ?"

"ಇಲ್ಲ ಅಲ್ಲೆ ನಮ್ಮ ಮನೆ"

"ಓಹ್... ಹೌದಾ" ಅಂದೆ ನಗುತ್ತಾ...

"ಎಂತಕೆ ನಕ್ಕಿದ್ದು?"

"ಕ್ಷಮಿಸಿ ನಿಮ್ಮ ಬಗ್ಗೆ ನಕ್ಕಿದ್ದಲ್ಲ, ಪ್ರವಾಸಿ ತಾಣದಲ್ಲೂ ಜನ ವಾಸ ಮಾಡ್ತಾರೆ ಅಂತ ತಕ್ಷಣಕ್ಕೆ ಹೊಳೆಯಲ್ಲ... "

"ಸರಿಹೋಯ್ತ್..." ಅಂದಳು ನಗುತ್ತಾ...

"ಹಾಗಿದ್ರೆ ದಿನಾ ಸಮುದ್ರ ನೋಡ್ಬೋದು ಚೆನಾಗಿರುತ್ತೆ ಅಲ್ವಾ?"

"ದಿನಾ ಅದನ್ನೇ ನೋಡಿ ನೋಡಿ ಬೇಜಾರಾಗಿದೆ"

"!"

"ಸರಿ, ಸೂರತ್ಕಲ್ ಬಂತು ನಾನು ಇಳೀತೀನಿ"

"ನಾನೂ ಬರ್ತೀನಿ"

"!!"

"ಬೀಚ್ ನೋಡಿಕೊಂಡು ಮತ್ತೆ ಮಂಗಳೂರಿಗೆ ಹೋಗ್ತೀನಿ"

"ಸರಿ"

Comments !