ARAVINDA VK

ಅಲ್ಲೊಂದೂರಲ್ಲಿ ಪುಟ್ಟ ಹಕ್ಕಿ

Jun 26, 2019
1 minute read.
ಕನ್ನಡ ಇಂಪನ ಮಗಳು

ನಾಲ್ಕು ವರ್ಷದ ಮಗಳು ಇಂಪನಾಳಿಗೆ ಕಥೆ ಹೇಳುವುದು, ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಅದನ್ನೇ ಗಮನದಲ್ಲಿಟ್ಟುಕೊಂಡು ಈ ಪ್ರಯತ್ನಕ್ಕೆ ಕೈ ಹಾಕಿದ್ದೇವೆ. ಅವಳದ್ದೇ ಕಥೆ, ಅವಳದ್ದೇ ಚಿತ್ರ ಕಲ್ಪನೆ ಎಲ್ಲವನ್ನೂ ಸೇರಿಸಿ ಪುಸ್ತಕ ಮಾಡಿದ್ದೇವೆ.

[ಬುಕ್ ಕವರ್

ಕಥೆಯಲ್ಲಿ ಬರುವಂತೆ ಬೆಕ್ಕು ರೌಡಿಯಾಗಿದ್ದು ಬಹಳ ಜನರಿಗೆ ಬೇಸರವಾಗಿದೆ. ನಿಜ ವಿಷಯ ಏನೆಂದರೆ, ಇಂಪನ ಅವಳ ಕಥೆಯಲ್ಲಿ ಹೇಳಿದ್ದು ಕಳ್ಳ ಅಂತ. ಆದರೆ ಅವಳಿಗೆ ಬರೆಯೋದು ಕಷ್ಟ ಆಗುತ್ತೆ ಅಂತ ಬೆಕ್ಕು ಬರೆಯುವ ಐಡಿಯಾ ಕೊಟ್ಟೆ.

ಹಾರುತ್ತಿರುವ ಹಕ್ಕಿ ಬರೆಯಲು ಇಂಪನಳಿಗೆ ಸುಲಭವಾಗಲಿ ಎಂದು 333 ಬರೆದು ಹಕ್ಕಿ ಹಾರುವಂತೆ ಬರೆಯುವುದಕ್ಕೆ ಚಿನ್ಮಯಿ ಹೇಳಿಕೊಟ್ಟಳು.

ಇಂಪನ ಪೇಪರ್ ನಲ್ಲಿ ಬರೆದು ಬಣ್ಣ ಹಚ್ಚಿದ ಚಿತ್ರಗಳನ್ನು ಸ್ಕ್ಯಾನ್ ಮಾಡಿ, Scribus ತಂತ್ರಾಂಶ ಬಳಸಿ ಪುಸ್ತಕ ಮಾಡಿದೆ. ಅಕ್ಷರಗಳಿಗೆ ಗುಬ್ಬಿ Font ಬಳಸಿದ್ದೇನೆ.

ಇಂಪನ

ಪ್ರಿಂಟ್ ಮಾಡಲು ಅನುಕೂಲವಾಗುವಂತೆ ಪುಟಗಳನ್ನು ಹೊಂದಿಸಿಕೊಡಲು ಕೆಳಗಿನಂತೆ ಲೇಟೆಕ್ ಕೋಡ್ ಬಳಸಿದೆ.

\documentclass[a4paper]{article}
\usepackage{pdfpages}

\begin{document}
\includepdf[pages=-,nup=1x2,noautoscale,booklet,landscape]{allonduralli-puttahakki.pdf}
\end{document}

ಇಂಪನಳ ಪುಸ್ತಕದ ಪಿಡಿಎಫ್ ಇಲ್ಲಿದೆ. ನೋಡಿ ನಿಮ್ಮ ಅನಿಸಿಕೆ ತಿಳಿಸಿ.

About Aravinda VK

Partner at Kadalu Investments, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in