ಅಲಾರ್ಮ್
ನನ್ನ ಮೊಬೈಲ್ ನೋಡ್ತಿದ್ದ ಗೋಪಿ ಕೇಳಿದ "ಏನೋ ಇಷ್ಟೋಂದ್ ಸಲ ಅಲಾರ್ಮ್ ಇಟ್ಟಿದ್ಯಾ?" ಅಂತ.
ನಾನು ಒಮ್ಮೆ ನಕ್ಕು ಹೇಳೋಕೆ ಶುರುಮಾಡಿದೆ. "ಎಲ್ಲರೂ ಏನ್ಮಾಡ್ತಾರಪ್ಪಾ ಅಂದ್ರೆ ಅಲಾರ್ಮ್ ಇಡುವಾಗ ಯೋಚ್ನೆ ಮಾಡಲ್ಲ, ಎಷ್ಟು ಗಂಟೆಗೆ ಏಳ್ಬೇಕೋ ಅಷ್ಟಕ್ಕೇ ಅಲಾರ್ಮ್ ಇಟ್ಟು ಮಲ್ಕೊಂಡ್ ಬಿಡ್ತಾರೆ. ಆದ್ರೆ ಅದು ಎಷ್ಟು unscientific ಅಂತ ಅವ್ರಿಗೆ ಗೊತ್ತಿಲ್ಲ, ಅವ್ರಿಗೆ ಎಂತ ಲೆಕ್ಕಾಚಾರನೂ ಮಾಡಕ್ಕೆ ಬರಲ್ಲ."
ಗೋಪಿ ಮುಖದಲ್ಲಿ ಬರೀ ಪ್ರಶ್ನಾತ್ಮಕ ಚಿನ್ಹೆ ಮಾತ್ರ ಕಾಣಿಸ್ತಿತ್ತು.
"ನೋಡು ಗೋಪಿ ನೀನೇ ನೋಡಿದಂಗೆ ಮೂರು ಅಲಾರ್ಮ್ ಇಟ್ಟಿದೀನಿ, ಮೂರೂ ಬೇರೆ ಬೇರೆ ಟೈಮ್ ಅಲ್ಲಿ ಇದೆ. 8 ಗಂಟೆಗೆ ಒಂದು, 8:25 ಕ್ಕೆ ಒಂದು ಮತ್ತೊಂದು 8:33ಕ್ಕೆ, ಮೊದಲಿನೆರಡು ಅಲಾರ್ಮ್ 10 ನಿಮಿಷದ ಸ್ನೂಜ್ ಇಟ್ಟಿದೀನಿ, ಮೂರನೆಯದಕ್ಕೆ 5 ನಿಮಿಷ ಸ್ನೂಜ್ ಇಟ್ಟಿದೀನಿ. ಸೋ.. ಅದರ ಪ್ರಕಾರ ಅಲಾರ್ಮ್ ಹೊಡೆದಾಗ ಹಿಂಗೆ ಕಾಣುತ್ತೆ ನೋಡು.. " (ಕೆಳಗಿನಂತೆ ಬರೆದು ತೋರಿಸಿದೆ.. )
-
8:00am, 8:10am, 8:20am, 8:30am, 8:40am
-
8:25am, 8:35am, 8:45am, 8:55am
-
8:33am, 8:38am, 8:43am, 8:48am
"ಈ ಮೂರೂ ಅಲಾರ್ಮ್ ಸೇರಿದಾಗ, 8, 8:10, 8:20, 8:25, 8:30, 8:33, 8:35, 8:38, 8:40, 8:43…"
"ಸ್ನೂಜ್ ಮಧ್ಯೆ ಗ್ಯಾಪ್ ಮೊದಲಿಗೆ ೧೦ ನಿಮಿಷ ಇದ್ದಿದ್ದು ಮತ್ತೆ ಕಡಿಮೆ ಆಗ್ತಾ ಬಂತು ನೋಡಿದ್ಯಾ? ಅಲಾರ್ಮ್ ಇಡೋದ್ರಲ್ಲೂ ಒಂದು ಲಾಜಿಕ್ ಇದೆ ಕಣಯ್ಯಾ.."
ಗೋಪಿ ಒಂದ್ಸಲ ತಲೆ ಕೆರ್ಕೊಂಡ, ಆಚೆ ಈಚೆ ನೋಡಿದ ಬಹುಷ: ತಲೆ ಚಚ್ಚಿಕೊಳ್ಳೋಕೆ ಏನಾದ್ರೂ ಇದ್ಯಾ ಅಂತ ಹುಡುಕಿರ್ಬೇಕು :P
ಸಲ್ಪ ಸುಧಾರಿಸಿಕೊಂಡು ಗೋಪಿ ಹೇಳಿದ, "ಅಲ್ವೋ ಮಾರಾಯ, ನಿನ್ನ ತರ ಲೆಕ್ಕ ಹಾಕ್ತಾ ಕೂತ್ರೆ ಯಾರಿಗೂ ಆಫೀಸ್‍ಗೆ ಹೋಗೋಕ್ಕಾಗಲ್ಲ. ಅಲ್ಲಾ ಇಷ್ಟೆಲ್ಲಾ ಅಲಾರ್ಮ್ ಇಡೋ ಬದ್ಲು ಒಂದು ಅಲಾರ್ಮ್ ಇಟ್ಟು snooze ೫ ನಿಮಿಷ ಇಟ್ರೆ ಆಗಲ್ವಾ?"
"ಅಯ್ಯಯ್ಯೋ ಹಂಗಾಗಲ್ಲಪ್ಪಾ! snooze ಅಂತ ಮಾಡೋ ಬದ್ಲು stop ಮಾಡಿದ್ರೆ ಆಫೀಸ್ ಕಥೆ ಏನು ಅಂತ ಯೋಚಿಸಿದ್ಯಾ?"
ಗೋಪಿ ಮಾಯ!..
ಗೋಪಿಗೆ ವಿಶ್ಯ ತಿಳ್ಕೋಬೇಕೂ ಅಂತ ಇಲ್ಲ, ನಿಮ್ಗೆ ಹೇಳ್ತೀನಿ ಕೇಳಿ. ನನ್ನನ್ಯಾರಾದ್ರೂ Android ಅಲ್ಲಿ ಫೇವರೇಟ್ ಅಪ್ಲಿಕೇಷನ್ ಯಾವ್ದು ಅಂತೇನಾದ್ರೂ ಕೇಳಿದ್ರೆ ನಾನು "ಅಲಾರ್ಮ್" ಅಂತಾನೇ ಹೇಳೋದು. ಅಲಾರ್ಮ್ ನಂಗೋಸ್ಕರ ಎಷ್ಟು ಕೇರ್ ತಗೋಳತ್ತೆ ಗೊತ್ತಾ.. ಅಲಾರ್ಮ್ ಸೆಟ್ ಮಾಡಿದಾಗ ಇನ್ನು ಎಷ್ಟು ಗಂಟೆ ನಿದ್ರೆ ಸಿಗುತ್ತೆ ಅಂತ ತೋರಿಸುತ್ತೆ, ಉದಾಹರಣೆಗೆ ಒಂದಿವ್ಸ 8 ಗಂಟೆ 45 ನಿಮಿಷ ಇದೆ ಅಂತ ತೋರಿಸ್ತು, ವಾವ್ ಇವತ್ತು ಎಂಟು ಗಂಟೆ ನಿದ್ರೆ ಸಿಗ್ತಾ ಇದೆ ಅಂತ ಬಹಳ ಖುಷಿ ಆಯ್ತು. ಅಲಾರ್ಮ್ ನ disable ಮಾಡಿ ಮತ್ತೆ enable ಮಾಡಿ ನೋಡಿದೆ, ಮತ್ತೆ ಮೆಸೇಜ್ ತೋರಿಸ್ತು. ಫುಲ್ ಖುಷಿಯಾಗಿ ನಿದ್ರೆ ಮಾಡಿದೆ.
ಹಂಗೇ ಟೈಮ್ ಆದಾಗ Mesai Team ಮಾಡಿದ ಈ ವೀಡಿಯೋ ನೋಡಿ :)
About Aravinda Vishwanathapura
Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage