Aravinda VKhttp://aravindavk.inBlogs, Articles, Apps, Kannadaಹಾಸ್ಟೆಲ್ ನೆನಪು - ಜಾಗಿಂಗ್ http://aravindavk.in/blog/ಹಾಸ್ಟೆಲ್_ನೆನಪು_-_ಜಾಗಿಂಗ್ಒಂದು ಸಲ ಹಾಗೇ ಎಲ್ಲಾ ಮಾತಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಆರೋಗ್ಯದ ಬಗ್ಗೆ ಚರ್ಚೆ ಆಯ್ತು, ನಂತರ ಆರೋಗ್ಯ ಕಾಪಾಡಿಕೊಳ್ಳಲು ಜಾಗಿಂಗ್ ಹೋಗಬೇಕು ವ್ಯಾಯಾಮ ಮಾಡಬೇಕು ಅಂತ ಯೋಚನೆ ಬಂತು. ಆ ಯೋಚನೆ ಒಬ್ಬನಿಗೇ ಬಂದರೆ ಪರವಾಗಿರ್ಲಿಲ್ಲ, ಆದರೆ ಮೂರ್ನಾಲ್ಕು ಜನಕ್ಕೆ ಆ ಯೋಚನೆ ಬಂದಿದ್ದರಿಂದ ಮರುದಿನದಿಂದ ಜಾಗಿಂಗ್ ಹೋಗೋದು ಅಂತ ತೀರ್ಮಾನ ಆಯ್ತು. ಸರಿ ಮೊದಲ ದಿನವಾದ್ದರಿಂದ ಒಪ್ಪಿಕೊಂಡ ಎಲ್ಲರೂ ಎದ್ದರು ನಮ್ಮ ಹಾಸ್ಟೆಲ್ ನಿಂದ ಲಾಲ್ ಬಾಗ್ ವರೆಗೂ ಓಡಿಕೊಂಡು ಹೋಗೋದು ಅಲ್ಲಿ ಸಲ್ಪ ವ್ಯಾಯಾಮ ಮಾಡಿ ಮತ್ತೆ ಅಲ್ಲೇ ಹತ್ತಿರದಲ್ಲಿ ಕಾಫಿ ಕುಡಿದು ವಾಪಸ್ ನಡೆದು ಬರೋದು ಅಂತ ಡಿಸೈಡ್ ಆಯ್ತು. Fri, 23 Jul 2010 00:22:36 +0530ಹಾಸ್ಟೆಲ್ ನೆನಪು - ಫೋನ್ http://aravindavk.in/blog/ಹಾಸ್ಟೆಲ್_ನೆನಪು_-_ಫೋನ್_ಆಗ ಹಾಸ್ಟೆಲ್ ಅಲ್ಲಿ ಯಾರ ಬಳಿಯೂ ಮೊಬೈಲ್ ಇರ್ಲಿಲ್ಲ, ಕರೆ ಬಂದ್ರೆ ಫೋನ್ ಬಳಿ ಇದ್ದ ಯಾರಾದರೂ ಫೋನ್ ರಿಸೀವ್ ಮಾಡಿ ಯಾರಿಗೆ ಬಂದಿರುತ್ತೋ ಅವರ ಹೆಸ್ರು ಕೂಗಬೇಕಿತ್ತು... ನಮ್ಮ ರೂಮಿನ ಹತ್ತಿರನೇ ಫೋನ್ ಇದ್ದಿದ್ದರಿಂದ ನಾನೇ ಸುಮಾರು ಸಲ ರಿಸೀವ್ ಮಾಡ್ತಾ ಇದ್ದೆ. ಕರೆ ಬಂದಾಗ ಅವ್ರನ್ನ ಜೋರಾಗಿ ಕಿರುಚಿ ಕರೆಯೋದೇ ಒಂತರಾ ಮಜ, ಅವರಿಲ್ಲದಿದ್ರೆ ಏನಾದ್ರೂ ಹೇಳ್ಬೇಕಿತ್ತಾ ಅಂತ ಕೇಳಿ ಬರ್ದಿಟ್ಟುಕೊಳ್ಳೋದು. ನಮಗೆ ಆಗದವರಿಗೆ ಯಾರಾದ್ರು ಕಾಲ್ ಮಾಡಿದಾಗ ಮೂರು ಸಲ ಕೂಗ್ತಾ ಇದ್ವಿ, ಮೂರು ಸಲಕ್ಕೂ ಓ ಅನ್ಲಿಲ್ಲ ಅಂದ್ರೆ ಅವ್ನಿಲ್ಲ ಅಂತ ಫೋನ್ ಇಟ್ಟು ಬಿಡ್ತಿದ್ವಿ Fri, 23 Jul 2010 00:15:14 +0530ರಾಯರಿಗೆ ಏನಾಗಿತ್ತುhttp://aravindavk.in/blog/ರಾಯರಿಗೆ_ಏನಾಗಿತ್ತು"ರೀ" "ಏನೇ?" "ರಾಯರು ನಿನ್ನೆ ರಾತ್ರಿ ಹೋದರಂತೆ, ಹಾರ್ಟ್ ಅಟ್ಯಾಕ್ ಅಂತೆ" Fri, 23 Jul 2010 00:12:19 +0530ಇಡ್ಲಿ ಪುರಾಣhttp://aravindavk.in/blog/ಇಡ್ಲಿ_ಪುರಾಣಇದರಲ್ಲಿ ಬರುವ ಬಹಳಷ್ಟು ಸನ್ನಿವೇಶಗಳು ಕಾಲ್ಪನಿಕ, ಕೆಲವೊಂದು ನಿಜವಿರಲೂ ಬಹುದು ನಾನು ಎಲ್ಲಾ ದಿನಗಳಲ್ಲಿ ಅಲ್ಲದಿದ್ದರೂ ಬಹುತೇಕ ದಿನಗಳಲ್ಲಿ ಬೆಳಗಿನ ಉಪಹಾರಕ್ಕೆ ಇಡ್ಲಿ ತಗೊಳ್ತಾ ಇದ್ದೆ. ನನ್ನ ಗೆಳೆಯ ಬೆಳಗ್ಗೆ ಆಫೀಸ್ ಕ್ಯಾಂಟೀನ್ ನಲ್ಲಿ ಸಿಕ್ಕಿದಾಗ, "ಮಗಾ ಇವತ್ತು ನೀನು ಏನು ತಿಂಡಿ ತಗೊಂಡೆ ಹೇಳಲಾ?" Fri, 23 Jul 2010 00:10:31 +0530