ARAVINDA VISHWANATHAPURA

ಪುಟ್ಟಿಗೊಂದು ಬ್ಯಾಗ್

May 10, 2016
1 minute read.
ಕನ್ನಡ ಇಂಪನ ಮಗಳು ಬ್ಯಾಗ್

ಹೊಲಿಗೆ ಯಂತ್ರ ಬಂದಾಗಿನಿಂದ(ತಂದಾಗಿನಿಂದ) ಏನಾದರೂ ಕ್ರಿಯೇಟಿವ್ ಆಗಿ ಏನಾದ್ರೂ ಮಾಡಬೇಕು ಅಂತ ಅನ್ನಿಸುತ್ತಲೇ ಇತ್ತು. ಮೊನ್ನೆಯಿಂದ ಪುಟ್ಟಿಗೆ ಬ್ಯಾಗ್ ಹೊಲಿಯೋಣ ಅಂತ ಶುರು ಮಾಡಿದೆ. ಪೇಪರ್ ನಲ್ಲಿ ಡಿಸೈನ್ ಬರೆದುಕೊಂಡು ಯೋಚಿಸಲಾರಂಭಿಸಿದೆ, ಹೇಗೆ ಮಾಡೋದು, ಯಾವ ಡಿಸೈನ್ ಅಂತೆಲ್ಲಾ. ಪ್ರತೀಸಲ ಯೋಚಿಸಿದಾಗಲೂ ಏನಾದರೂ ಹೊಸ ಐಡಿಯಾ ಬರ್ತಿತ್ತು, ಕೊನೆಗೂ ಒಂದು ಐಡಿಯಾ finalize ಮಾಡಿದೆ.

ಮೊದಲನೇ ಪ್ರಯತ್ನ ಆದರೂ ಮನಸಿಗೆ ಖುಶಿಕೊಟ್ಟಿದೆ.

Bag

ಎರಡು ಬಣ್ಣ ಉಪಯೋಗಿಸೋಣ ಅಂತ ಅನ್ನಿಸ್ತು. ಹ್ಯಾಂಡಲ್ ಗೆ ಒಂದು ಬಣ್ಣ ಮತ್ತೆ ಬ್ಯಾಗ್ ಗೆ ಇನ್ನೊಂದು. ಇದಕ್ಕೋಸ್ಕರ ಹಾಕದೇ ಬಿಟ್ಟಿದ್ದ ಎರಡು ಶರ್ಟ್ ತಂದಿಟ್ಟುಕೊಂಡೆ. ಹ್ಯಾಂಡಲ್ ಮತ್ತೆ ಬ್ಯಾಗ್ ನ ಹ್ಯಾಂಡಲ್ ಗೆ ಕಲರ್ ಮಿಕ್ಸಿಂಗ್ ಮಾಡಿದೆ. ಎರಡು ಬಟ್ಟೆಗಳ ಮದ್ಯೆ ಮತ್ತೊಂದು ಬಣ್ಣದ ಬಟ್ಟೆ ಇಟ್ಟು ಹೊಲಿದೆ.

Cover design
Handle design

Notes

  • ಹೊಲಿಗೆ ಪ್ಲಾನಿಂಗ್ ಆದಮೇಲೆ ಮಡಿಕೆ ಬರಬೇಕಾದಲ್ಲಿ ಬಟ್ಟೆ ಒದ್ದೆಮಾಡಿ ಐರನ್ ಮಾಡಿಕೊಂಡರೆ ಹೊಲಿಗೆ ಹಾಕಲು ಸುಲಭ ಆಗುತ್ತೆ.

  • ಡಿಸೈನ್ ಆದ ನಂತರ ತಕ್ಷಣ ಬಟ್ಟೆ ಕಟ್ ಮಾಡಬೇಡಿ. ಸಲ್ಪ ಹೊತ್ತು ಡಿಸೈನ್ ಬಗ್ಗೆ ಮನಸಲ್ಲೇ ಯೋಚಿಸಿ, ಯಾವ ಹೊಲಿಗೆ ಆದಮೇಲೆ ಯಾವುದು ಅಂತ ಮನಸಲ್ಲೇ ಹೊಲಿಗೆ ಹಾಕಿದರೆ ಮುಂದೆ ಆಗೋ ತಪ್ಪುಗಳು ಕಡಿಮೆ ಆಗುತ್ತೆ.

  • ಒಂದು ಡಿಸೈನ್ ಆಯ್ಕೆ ಮಾಡಿದ ಮೇಲೆ ಅದಕ್ಕೆ ಏನನ್ನೂ ಸೇರಿಸಲು ಹೋಗಬಾರದು. ಐಡಿಯಾ ಬಂದ್ರೆ ಬರೆದಿಟ್ಟುಕೊಂಡರೆ ಮುಂದಿನ ಸಲಕ್ಕೆ ಆಗುತ್ತೆ, ಆದರೆ ಶುರುಮಾಡಿರುವ ಡಿಸೈನ್ ಬದಲಾಯಿಸುತ್ತಿದ್ದರೆ complete ಮಾಡೋದು ಬಹಳ ಸಮಯ ತಗೊಳೊತ್ತೆ ಆಮೇಲೆ ಇಂಟರೆಷ್ಟ್ ಹೋಗಿ ಕೈಗೆತ್ತಿಕೊಂಡ ಕೆಲಸ ಮುಗಿಯೋದೇ ಇಲ್ಲ.(software development ಅನುಭವ :) "Release early, release often"

  • Steps ಗಳ ಫೋಟೋಸ್ ತೆಗೆದುಕೊಂಡ್ರೆ ಮುಂದೆ ಉಪಯೋಗಕ್ಕೆ ಬರುತ್ತೆ.(ನನಗೀಸಲ ಮರೆತುಹೋಯ್ತು)

ತಪ್ಪುಗಳು

  • ಕಲರ್ ಮಿಕ್ಸ್ ಮಾಡಕ್ಕೆ ತುಂಡು ಬಟ್ಟೆಗಳನ್ನು ತಗೊಂಡೆ, ಉದ್ದದ ಒಂದೇ ಬಟ್ಟೆ ಆಗಿದ್ದರೆ ಇನ್ನೂ ಚೆನ್ನಾಗಿ ಬರ್ತಿತ್ತು.

  • ಹೊಲಿಗೆ ಇನ್ನೂ ನೇರವಾಗಿ ಚೆನ್ನಾಗಿ ಮಾಡಬಹುದಿತ್ತು.

    Handle Lines
  • ಹೊಲಿಗೆ steps ಸರಿಯಾಗಿ ಪ್ಲಾನ್ ಮಾಡಿಲ್ಲ ಅಂದ್ರೆ ಡೆಡ್ ಲಾಕ್ ಆಗುತ್ತೆ, ಕೆಳಗಿನ ಚಿತ್ರದಲ್ಲಿ ತೋರಿಸಿದಂಗೆ ಆ ಜಾಗದಲ್ಲಿ ಹೊಲಿಗೆ ಹಾಕಲು ಆಗಲ್ಲ, ಇನ್ನು ಕೈ ಹೊಲಿಗೆ ಹಾಕ್ಬೇಕು ಅಷ್ಟೆ.

    Deadlock
  • ತೆಳ್ಳಗೆ ಆಗಬಹುದು ಅಂತ ಎಲ್ಲಾ ಕಡೆ ಎರೆಡೆರಡು layer ಮಾಡಿಕೊಂಡೆ, ಕೊನೆ ಕೊನೆಗೆ ಹೊಲಿಗೆ ಹಾಕಲು ತುಂಬಾ ದಪ್ಪ ಆಯಿತು ಕೆಲವು ಕಡೆ.

  • ಹೀಗೆ ಮುಂದೆ joint ಬರಬಾರದಿತ್ತು.

    Front Joint

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in