ARAVINDA VISHWANATHAPURA

ಹೆಜ್ಜೆ - ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ

Jan 17, 2012
1 minute read.
ಹೆಜ್ಜೆ ಕನ್ನಡ ಕಾರ್ಯಕ್ರಮ kannadablog

ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡಕ್ಕೆ ದುಡಿಯುವ ಬಲವಾದ ಆಸೆಯಿರುತ್ತದೆ. ಅಕ್ಷರ ಕಲಿಯುವ ದೆಸೆಯಿಂದ ಹಿಡಿದು, ದುಡಿದು ದೊಡ್ಡವನಾಗುವವರೆಗೂ ಹೇಗೆ ತನ್ನ ಆಸೆಯನ್ನು ಈಡೇರಿಸಿಕೊಳ್ಳುವುದೆಂಬ ಪ್ರಶ್ನೆ ಮನಸ್ಸಿನಲ್ಲಿ ಸುಳಿಯುತ್ತಲೇ ಇರುತ್ತದೆ. ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಂತೂ, ಅದನ್ನು ಬಳಸುವ ಸಾಮಾನ್ಯನಿಂದ ಹಿಡಿದು, ತಂತ್ರಜ್ಞಾನದ ಜೊತೆಗೇ ದಿನದೂಡುವ ತಂತ್ರಜ್ಞನವರೆಗೂ ಎಲ್ಲರಿಗೂ ಕನ್ನಡ ಬಳಸುವ ಮತ್ತು ಬೆಳೆಸುವ ಆಸೆ ಖಂಡಿತ ಇರುತ್ತದೆ. ಅಂತಹ ಆಸೆಗಳನ್ನು ಮತ್ತೆ ಚಿಗುರಿಸಿ, ಮಾಹಿತಿ ತಂತ್ರಜ್ಞಾನದ ಬಳಕೆದಾರನ ದಿನನಿತ್ಯದ ಪ್ರಶ್ನೆಗಳನ್ನು ಉತ್ತರಿಸುತ್ತಾ, ಕನ್ನಡದ ತಾಂತ್ರಿಕ ಬೆಳವಣಿಗೆಗೆ ನಾಂದಿಯಾಗಲು ನಾವು ಇಡಬೇಕಾದ ‘ಹೆಜ್ಜೆಗಳು” ಅನೇಕ.

ನಮ್ಮ ಸಂಚಯ ತಂಡದಿಂದ ಅರಿವಿನ ಅಲೆಗಳು ನಂತರದ ಎರಡನೇ ಕಾರ್ಯಕ್ರಮ "ಹೆಜ್ಜೆ". ಈಗ ತಂತ್ರಜ್ಞಾನ ಓಡುತ್ತಿರುವ ವೇಗಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಕೊಂಡೊಯ್ಯಲು ನಮ್ಮ ತಂಡದಿಂದ ಇಡುತ್ತಿರುವ ಪುಟ್ಟ ಪುಟ್ಟ "ಹೆಜ್ಜೆ"ಗಳು.

ಹೆಜ್ಜೆ

ಕನ್ನಡ ಬಳಕೆ, ತಂತ್ರಾಂಶಗಳ ಬಳಕೆ, ತಂತ್ರಾಂಶಗಳಲ್ಲಿ ಸ್ಥಳೀಯ ಸೊಗಡು, ತಂತ್ರಾಂಶಗಳ ತಯಾರಿಕೆ ಹಾಗೂ ಇತರೆ ವಿಷಯಗಳನ್ನು ನಮ್ಮ ನಿಮ್ಮೊಂದಿಗೆ ಹಂಚಿಕೊಳ್ಳಲು ತಂತ್ರಜ್ಞರು ಉತ್ಸುಕರಾಗಿದ್ದಾರೆ. ವಿಜ್ಞಾನ ಲೇಖಕ ಶ್ರೀ ನಾಗೇಶ್ ಹೆಗಡೆ, ಛಂದ ಪುಸ್ತಕದ ವಸುದೇಂದ್ರ ಜೊತೆಗಿದ್ದಾರೆ.

ವಿವರಗಳು

ದಿನಾಂಕ: ಜನವರಿ ೨೨, ೨೦೧೨

ಸ್ಥಳ: ದ ಎನರ್ಜಿ & ರಿಸರ್ಚ್ ಇನ್ಸ್ಟಿಟ್ಯೂಟ್ (TERI-SRC) ಆಡಿಟೋರಿಯಂ ದೊಮ್ಮಲೂರು ಎರಡನೇ ಹಂತ ಬೆಂಗಳೂರು ೫೬೦೦೭೧

ಅಂತರ್ಜಾಲ ಪುಟ: `http://hejje.sanchaya.net

ನೊಂದಾಯಿಸಿಕೊಳ್ಳಲು: `http://hejje.sanchaya.net/register/

ಕಾರ್ಯಕ್ರಮಗಳು: `http://hejje.sanchaya.net/program-list/

ರಿಜಿಸ್ಟರ್ ಮಾಡಿಕೊಳ್ಳಲು(ನೊಂದಾಯಿಸಿಕೊಳ್ಳಲು) ಏನಾದರೂ ತೊಂದರೆಯಾದರೆ team AT sanchaya ಡಾಟ್ net ಗೆ ಈಮೈಲ್ ಕಳಿಸಿ.

ಈ ಕಾರ್ಯಕ್ರಮದಲ್ಲಿ ಏನು ಸಿಗುತ್ತದೆ, ಏನು ಮಾಡಲು ಹೊರಟಿದ್ದಾರೆ ಎಂಬ ಕುತೂಹಲವಿದ್ದರೆ ಖಂಡಿತ ನೀವು ಭಾಗವಹಿಸಲೇಬೇಕು…​ :)

"ಹೆಜ್ಜೆ" ಕಾರ್ಯಕ್ರಮದಲ್ಲಿ ಸಿಗುತ್ತೀರಲ್ವ?

About Aravinda Vishwanathapura

Co-Founder & CTO at Kadalu Technologies, Creator of Sanka, Creator of Chitra, GlusterFS core team member, Maintainer of Kadalu Storage
Contact: Linkedin | Twitter | Facebook | Github | mail@aravindavk.in